How Anthropic’s new AI tool could impact IT jobs

How Anthropic’s new AI tool could impact IT jobs

ಐಟಿ ಸಾಮ್ರಾಜ್ಯಕ್ಕೆ ನಡುಕ
ಒಂದೇ ಒಂದು ಟೂಲ್ ಕೇವಲ ಒಂದೇ ಒಂದು ಸಾಫ್ಟ್‌ವೇರ್ ಅಪ್‌ಡೇಟ್ ಇಡೀ ಜಗತ್ತಿನ ಐಟಿ ಸಾಮ್ರಾಜ್ಯವನ್ನ ಬುಡಮೇಲು ಮಾಡಿದೆ. ಅಮೆರಿಕದ ವಾಲ್ ಸ್ಟ್ರೀಟ್‌ನಿಂದ ಹಿಡಿದು ನಮ್ಮ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯವರೆಗೂ ಈಗ ಎಲ್ಲೆಡೆ ನೋಡಿ ಒಂದೇ ಚರ್ಚೆ ಆಗ್ತಿದೆ ಅದು Saaspolaypse. ಅಂದ್ರೆ Saas ಕಂಪನಿಗಳ ಅಂತ್ಯದ ಬಗ್ಗೆ. ಒಂದೇ ದಿನದಲ್ಲಿ ಜಾಗತಿಕ ಮಾರುಕಟ್ಟೆಯಿಂದ ಬರೋಬ್ಬರಿ 285 ಬಿಲಿಯನ್ ಡಾಲರ್ ಅಂದ್ರೆ ನಮ್ಮ ರೂಪಾಯಿ ಲೆಕ್ಕದಲ್ಲಿ ಸುಮಾರು 25 ಲಕ್ಷ ಕೋಟಿ ರೂಪಾಯಿ ಆಸ್ತಿ ಧೂಳಿಪಟ ಆಗಿದೆ. ಕಾರಣ Anthropic ಅನ್ನೋ ಕಂಪನಿ ಬಿಡುಗಡೆ ಮಾಡಿರೋ ಒಂದು ಹೊಸ ಎಐ ಟೂಲ್. ಅಸ್ತ್ರ AI ಬಗ್ಗೆ ಸಾಫ್ಟ್‌ವೇರ್ ಜಗತ್ತಿನಲ್ಲಿ ತುಂಬಾ ಬದಲಾವಣೆಗಳನ್ನ ಮಾಡುತ್ತೆ ಅನ್ನುವ ಚರ್ಚೆ ಇತ್ತು. ಆದರೆ ಕರೆಕ್ಟಾಗಿ ಅದಕ್ಕೊಂದು ಅಡಾಪ್ಟ್ ಮಾಡಿಕೊಳ್ಳೋಕೆ ಒಂದು ಎಐ ಟೂಲ್ ಸಿಕ್ಕಿರಲಿಲ್ಲ. ಪ್ರಾಪರ್ ಆಗಿ ಈಗ ತಗೊಳ್ಳಿ ನಾವು ರೆಡಿ ಮಾಡಿದ್ದೀವಿ ಅಂತ ANTHROPIC Ai ಅದನ್ನು ರಿಲೀಸ್ ಮಾಡುತ್ತಿದ್ದ ಹಾಗೆ ಅಮೆರಿಕ ಭಾರತ ಎಲ್ಲಾ ಕಡೆ ಐಟಿ ಕಂಪನಿಗಳ ಶೇರುಗಳು ಬಿದ್ದು ಹೋಗಿವೆ. ಅಮೆರಿಕದ ಕಂಪನಿಗಳು ಮತ್ತು ನಮ್ಮ ಇನ್ಫೋಸಿಸ್ ವಿಪ್ರೋ ಟಿಸಿಎಸ್‌ನವು ಕೂಡ ಬಿದ್ದು ಹೋಗಿವೆ.
Bloomberg ರಿಪೋರ್ಟ್ ಪ್ರಕಾರ ಲೀಗಲ್ ಸಾಫ್ಟ್‌ವೇರ್ ಕಂಪನಿಗಳು ರಕ್ತದ ಮಡುವಿನಲ್ಲಿ ಬಿದ್ದ ಹಾಗೆ ಒದ್ದಾಡ್ತಿವೆ. ಭಾರತದಲ್ಲೂ ಕೂಡ ನಿನ್ನೆ ಇತಿಹಾಸ ನಿರ್ಮಾಣವಾಗಿದೆ. ಅದೇನಪ್ಪಾ ಅಂದ್ರೆ Anthropic ಅನ್ನೋ ಇವತ್ತಿನವರೆಗೂ ಬಂದಿರೋ ChatGPT Gemini ಗಿಂತ ಇದು ಹೇಗೆ ಡಿಫರೆಂಟ್? ಭಾರತದ ಐಟಿ ಕಂಪನಿಗಳ ಸರ್ವಿಸ್ ಮಾಡೆಲ್‌ಗೆ ಇವತ್ತು ನಿಜವಾದ ಕೌಂಟ್‌ಡೌನ್ ಶುರುವಾಯ್ತು. ನಮ್ಮ ದೇಶದ ಅರ್ಥಿಕತೆಗೆ ದೊಡ್ಡ ಪ್ರಮಾಣದಲ್ಲಿ ಕೊಡುಗೆ ಕೊಡ್ತಿರೋ ನಮ್ಮ ಐಟಿ ಸೆಕ್ಟರ್‌ನ ನೌಕರದಾರರಿಗೆ ಒಂಥರಾ ಆತಂಕ ಇರಬಹುದು.
ಇದರಿಂದ ಇಷ್ಟು ದಿನ ನೀವು ನೋಡ್ತಾ ಇದ್ದ AIಗಳು ನಮಗೆ ಬರೀ ಸಲಹೆ ಕೊಡ್ತಾ ಇದ್ವು. ನೀವು ಕೇಳಿದ ಪ್ರಶ್ನೆಗೆ ಉತ್ತರ ಕೊಡ್ತಾ ಇದ್ವು. ಕೋಡ್ ಬರೆದು ಕೊಡ್ತಾ ಇದ್ವು. ಆದ್ರೆ ಈಗ Anthropic ಲಾಂಚ್ ಮಾಡಿರೋದು ಬರಿ ಚಾಟ್ ಬಾಟ್ ಮಾತ್ರ ಅಲ್ಲ ಇದೊಂದು ಏಜೆಂಟ್. ಏಜೆಂಟಿಕ್ ಎಐ ಇದರ ಹೆಸರು CLAUDE COWORK ಅಂತ. ಹೆಸರೇ ಹೇಳಿರೋ ಹಾಗೆ ಇದು ನಿಮ್ಮ ಸಹೋದ್ಯೋಗಿ ಅಥವಾ ಕಲೀಗ್ ತರ ನಿಮಗೇ ಹೇಳಿದಂಗೆ ಅಸಿಸ್ಟೆಂಟ್ ತರ ಕೆಲಸ ಮಾಡಿಕೊಳ್ಳುತ್ತೆ. ಇದು ಯಾಕೆ investors ನಿದ್ದೆ ಕೆಡಿಸಿದೆ ಅಂದ್ರೆ ಇವತ್ತಿನವರೆಗೂ AI ಅಂದ್ರೆ ನಮಗೆ ಐಡಿಯಾ ಕೊಡ್ತಾ ಇತ್ತು. ಆದರೆ ಫೈನಲ್ ಕೆಲಸವನ್ನ ಮನುಷ್ಯರೇ ಮಾಡಬೇಕಾಗಿತ್ತು.
Claude cowork legal ರಿಸರ್ಚ್ ಡಾಕ್ಯುಮೆಂಟ್ ಟ್ರೈನಿಂಗ್ ಡೇಟಾ ಅನಾಲಿಸಿಸ್ ಹೇಗೆ ಎಂಡ್ ಟು ಎಂಡ್ ತಿಳಿಯುತ್ತಾ ತಾನೇ ಮಾಡಿಬಿಡುತ್ತೆ. ಉದಾಹರಣೆಗೆ ನೀವು ಇದಕ್ಕೆ ಕಾಂಟ್ರಾಕ್ಟ್ ಚೆಕ್ ಮಾಡು ಅಂತ ಹೇಳಿದರೆ ನೀವು ಅದೇ ಫೈಲ್ ಓಪನ್ ಮಾಡುತ್ತೆ. ಅದೇ ಅದರೊಳಗೆ legal ಕ್ಲಾಸಸ್ ಓದುತ್ತದೆ ರಿಸ್ಕ್ ಎಲ್ಲಿದೆ ಅಂತ ಹುಡುಕಿ ಹೇಗೆ ತಿದ್ದಬೇಕು ಅಂತ ಅದೇ ಡ್ರಾಫ್ಟ್ ಮಾಡಿ ಬಿಡುತ್ತೆ. ಕೊನೆಗೆ ಒಂದು ಬ್ರೀಫಿಂಗ್ ಫೈಲ್ ಕೂಡ ತುಂಬಾ ಚೆನ್ನಾಗಿ ರೆಡಿ ಮಾಡಿಕೊಡುತ್ತೆ. ಇದಕ್ಕೆ ನೀವು ಪ್ರತಿ ಹಂತದಲ್ಲೂ ಕಮಾಂಡ್ ಕೊಡುವ ಅಗತ್ಯವೇ ಇಲ್ಲ. ಇದನ್ನೇ ಆಟೋನಮಸ್ ಕೇಪಬಿಲಿಟೀಸ್ ಅಂತ ಕರೀತಾರೆ. ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ಇದು ಅಡ್ವಾನ್ಸ್ ಲೆವೆಲ್‌ನಲ್ಲಿ ಕೆಲಸವನ್ನ execute ಮಾಡುತ್ತೆ. ಇಷ್ಟು ದಿನ ಮನುಷ್ಯರು ಮಾಡುತ್ತಿದ್ದ ವರ್ಕ್ ಫ್ಲೋ ಅಂದ್ರೆ ಕೆಲಸದ ದಾರಿಯೇನಿದೆ ಅದನ್ನು ಇದು ಅಟೋನಮಸ್ ಆಗಿ ತಾನೇ ಮಾಡುತ್ತಾ ಇದೆ. ಈಗ ಇನ್ವೆಸ್ಟರ್‌ಗಳಿಗೆ ಬಂದಿರೋ ಭಯ ಏನು ಗೊತ್ತಾ ಇದರಿಂದ ಒಂದು ವೇಳೆ ಈ ಎಐ ಏಜೆಂಟ್ ಒಬ್ಬ ಮನುಷ್ಯ ಮಾಡೋ ಕೆಲಸವನ್ನು ಯಾವುದೇ ತಪ್ಪು ಇಲ್ಲದೆ ಸಂಬಳ ಕೇಳದೆ ರಾತ್ರಿ ಹಗಲು ಮಾಡುತ್ತೆ ಅಂತ ಆದ್ರೆ ನಾವು ಯಾಕೆ ನೀವೇ ಲೀಗಲ್ ಕಂಪನಿಗಳಿಗೆ ದುಡ್ಡು ಕೊಟ್ಟು ಮಾಡಿಸಬೇಕು ಅನ್ನೋದು.
ಅಮೇರಿಕಾದಲ್ಲಿ ರಕ್ತಪಾತ ಅಮೇರಿಕಾದ ಶೇರು ಮಾರುಕಟ್ಟೆಯು ಒಂದೇ ವಾರದಲ್ಲಿ ಸಾಫ್ಟ್‌ವೇರ್ ಮತ್ತು ಫೈನಾನ್ಸಿಯಲ್ ಡೇಟಾ ಕಂಪನಿಗಳ 285 ಬಿಲಿಯನ್ ಡಾಲರ್ ಮಾರ್ಕೆಟ್ ವೈಪ್ ಆಯ್ತು. ಮಾರ್ಕೆಟ್ ವೈಪ್ ಅಂದ್ರೆ 25 ಲಕ್ಷದ 78 ಸಾವಿರ ಕೋಟಿ ರೂಪಾಯಿಯನ್ನು ಕತರ್, ಶ್ರೀಲಂಕಾ ಮತ್ತು ಒಮಾನ್ ರಾಷ್ಟ್ರಗಳ ಜಿಡಿಪಿಗಿಂತ ಜಾಸ್ತಿ ಅಮೌಂಟ್. ಅದಕ್ಕೆ ತಜ್ಞರು ಇದನ್ನ “Saaspocalypse” ಅಂತ ಕರೆದಿದ್ದಾರೆ. SaaS ಅಂದ್ರೆ “Software as a Service” ಕಂಪನಿಗಳ ಪ್ರಳಯ ಅಂತ.
LegalZoom ಕಂಪನಿ ಇದು ವಕೀಲರ ಕೆಲಸ ಮಾಡಿಕೊಡುತ್ತೆ . ಇದರ ಶೇರು ಬೆಲೆ ಒಂದೇ ದಿನದಲ್ಲಿ ಸುಮಾರು 19% ಬಿತ್ತು. Thomson Reuters Corp ಕಂಪನಿ 15% ಶೇರು ಬಿತ್ತು ಎಐ ಇದೇ ಕೆಲಸವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಮಾಡುತ್ತದೆ ಅಂದ್ರೆ ಯಾರು ತಾನೇ ದುಬಾರಿ Subscription ತಗೊಳ್ಳುತ್ತಾರೆ. NVIDIA ಶೇರುಗಳು ಬಿದ್ದಿವೆ ಯಾಕಂದ್ರೆ ಸಾಫ್ಟ್‌ವೇರ್ ಕಂಪನಿಗಳಿಗೆ NVIDIA ದೊಡ್ಡ Customers software ಕಂಪನಿಗಳಿಗೆ ಸಂಕಷ್ಟ ಬಂದ್ರೆ ಚಿಪ್ ಯಾರು ತಗೊಳುತ್ತಾರೆ ಅನ್ನೋ ಲಾಜಿಕ್ ಇದರಿಂದ Anthropic ai ವಿಶ್ವಾದ್ಯಂತ IT industry ಗೆ ನಡುಕ ಹುಟ್ಟಿಸಿದೆ

Leave a Comment

Translate »