Soujanya case dharmsthala

Soujanya case dharmsthala

2012 ರಲ್ಲಿ ನಡೆದ ಸೌಜನ್ಯ ಪ್ರಕರಣ ಸಿಐಡಿ ಮತ್ತು ಸಿಬಿಐ ತನಿಖೆಗೆ ನಡೆಸಿದರು ಧರ್ಮಸ್ಥಳ ಗ್ರಾಮದಲ್ಲಿ ಅಪರಾಧಿಗಳು ಯಾರು ಎಂದು ಇದುವರೆಗೆ ದೇಶದ ಉನ್ನತ ತನಿಖಾ ಸಂಸ್ಥೆಗಳು 13 ವರ್ಷ ಕಳೆದರು ಪತ್ತೆ ಹಚ್ಚಿಲ್ಲ ಸೌಜನ್ಯ ತಾಯಿ ಕುಸುಮಾವತಿ ಅವರು ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು ಇದೀಗ ವಿಚಾರಣೆ ನಡೆಸಿದ ಮಾನ್ಯ ಸರ್ವೋಚ್ಚ ನ್ಯಾಯಾಲಯ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರ ಮತ್ತು ಸಿಬಿಐ ಗೆ ನೋಟಿಸ್ ನೀಡಿದೆ

ಇದರಿಂದ ಸೌಜನ್ಯ ಪ್ರಕರಣ ಮತ್ತೆ ಜೀವಂತ ಆಗಿದೆ ಸೌಜನ್ಯ ಪ್ರಕರಣದ ಸಾಕ್ಷ್ಯ ನಾಶ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಕ್ಕಳ ನ್ಯಾಯಾಲಯವೂ ಸರ್ಕಾರಕ್ಕೆ ನೋಟಿಸ್ ಕೊಟ್ಟರು ರಾಜ್ಯ ಸರ್ಕಾರ ತನಿಖೆ ನಡೆಸಿದೆ ನಿರ್ಲಕ್ಷ್ಯ ವಹಿಸಿದೆ ಇಗ ಸುಪ್ರೀಂ ಕೋರ್ಟ್ ಸಿಬಿಐ ಮತ್ತು ರಾಜ್ಯ ಸರ್ಕಾರಕೆ ನೋಟಿಸ್ ಕೊಟ್ಟಿರುವುದು ಸೌಜನ್ಯ ಹೋರಾಟಗಾರರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ justice for soujanya 🙏

ಸೌಜನ್ಯ ಹತ್ಯೆ ಪ್ರಕರಣ: ಮರುತನಿಖೆ ಅರ್ಜಿಗೆ ಸುಪ್ರೀಂ ಕೋರ್ಟ್ ಅಸ್ತು! ⚖️

 

ಧರ್ಮಸ್ಥಳದ ಸೌಜನ್ಯ ಹತ್ಯೆ ಪ್ರಕರಣದ ಮರುತನಿಖೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆಗೆ ಸ್ವೀಕರಿಸಿದೆ. ಈ ಪ್ರಕರಣದಲ್ಲಿ ಕುಟುಂಬಕ್ಕೆ ನ್ಯಾಯ ಸಿಗುವ ನಿಟ್ಟಿನಲ್ಲಿ ಇದೊಂದು ಮಹತ್ವದ ಬೆಳವಣಿಗೆಯಾಗಿದೆ.

 

ಪ್ರಮುಖ ಅಂಶಗಳು:

 

ನೋಟಿಸ್ ಜಾರಿ: ಸುಪ್ರೀಂ ಕೋರ್ಟ್ ಈ ಸಂಬಂಧ CBI ಮತ್ತು ಕರ್ನಾಟಕ ಸರ್ಕಾರಕ್ಕೆ ನೋಟಿಸ್ ನೀಡಿ ಉತ್ತರ ಕೋರಿದೆ.

 

ಅರ್ಜಿದಾರರು: ಸೌಜನ್ಯ ತಾಯಿ ಕುಸುಮಾವತಿ ಅವರು ಸಲ್ಲಿಸಿದ್ದ ವಿಶೇಷ ಅನುಮತಿ ಅರ್ಜಿಯ (SLP) ಮೇಲೆ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ವಿನೋದ್ ಚಂದ್ರನ್ ಅವರ ಪೀಠ ಈ ಕ್ರಮ ಕೈಗೊಂಡಿದೆ.

 

ವಕೀಲರ ವಾದ: CBI ಸ್ವತಂತ್ರವಾಗಿ ತನಿಖೆ ಮಾಡಿಲ್ಲ ಮತ್ತು ಪ್ರಮುಖ ಶಂಕಿತರನ್ನು ವಿಚಾರಣೆಗೆ ಒಳಪಡಿಸಿಲ್ಲ ಎಂದು ವಕೀಲರಾದ ಶೋಭಾ ಗುಪ್ತಾ ವಾದಿಸಿದರು.

 

SIT ತನಿಖೆ: ಧರ್ಮಸ್ಥಳದ ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರ ರಚಿಸಿರುವ SIT ಗೆ ಈ ಪ್ರಕರಣವನ್ನೂ ವಹಿಸುವ ಸಾಧ್ಯತೆಯ ಬಗ್ಗೆಯೂ ನ್ಯಾಯಾಲಯದಲ್ಲಿ ಚರ್ಚೆಯಾಗಿದೆ.

 

ಸೌಜನ್ಯ ಕುಟುಂಬದ 12 ವರ್ಷಗಳ ಸುದೀರ್ಘ ನ್ಯಾಯದ ಹೋರಾಟಕ್ಕೆ ಈಗ ಹೊಸ ಭರವಸೆ ಮೂಡಿದೆ.

 

#JusticeForSoujanya #SupremeCourt #DharmasthalaCase #Karnatakanews

Leave a Comment

Translate »