Dharmsthala case

Dharmsthala case

ಹಿರಿಯ ವಕೀಲರಾದ ಎಸ್ ಬಾಲನ್ ಅವರ ಮಾತಿನ ಮುಖ್ಯಾಂಶಗಳು:

 

“ಧರ್ಮಸ್ಥಳದಲ್ಲಿ ನಡೆದ ದೌರ್ಜನ್ಯಗಳ ವಿಚಾರದಲ್ಲಿ ಸುದೀರ್ಘವಾದ ವ್ಯವಸ್ಥೆಯ ವೈಫಲ್ಯವಿದೆ. ಸ್ಥಳೀಯ ಪೊಲೀಸ್, ಸಿಓಡಿ, ಸಿಬಿಐ ಎಲ್ಲರೂ ತನಿಖೆ ಮಾಡಿದ್ದಾರೆ, ಆದರೆ ಎಲ್ಲವೂ ವಿಫಲವಾಗಿವೆ. ಇದು ಒಂದು ರೀತಿಯಲ್ಲಿ ಎಫ್ಸ್ಟೀನ್ ಫೈಲ್ಸ್ ಇದ್ದ ಹಾಗೆ..ಧರ್ಮಸ್ಥಳ ಫೈಲ್ಸ್, ಅಥವಾ ಕರ್ನಾಟಕ ಫೈಲ್ಸ್ ಎನ್ನಬಹುದು… ಎಫ್ಸ್ಟೀನ್ ಫೈಲ್ಸ್‌ನಲ್ಲೂ ಪುಟ್ಟಮಕ್ಕಳನ್ನು ವಿಕೃತವಾಗಿ ಬಳಸುವ ಪೀಡೋಫಿಲ್ಸ್, ಇಲ್ಲಿ ಕೂಡಾ ನಡೆದಿರುವುದು ಅಂಥದ್ದೆ….”

 

” ‘ಕೊಂದವರು ಯಾರು?’ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ರಾಮಕೃಷ್ಣ ಹೆಗಡೆ ಸರ್ಕಾರದಿಂದ ಹಿಡಿದು ಸಿದ್ಧರಾಮಯ್ಯ ಸರ್ಕಾರದವರೆಗೆ ಎಲ್ಲವೂ ಈ ಪ್ರಶ್ನೆಗೆ ಉತ್ತರ ನೀಡಲು ವಿಫಲವಾಗಿವೆ. ಈಗ ಎಸ್‌ಐಟಿ ರಚನೆಯಾಗಿದೆ, ಅದಕ್ಕೆ ಪೊಲೀಸ್ ಠಾಣೆಯ ಅಧಿಕಾರ ನೀಡಲಾಗಿದೆ, ಆದರೆ ಇದುವರೆಗೆ ಒಂದೂ ಪ್ರಕರಣ ದಾಖಲಿಸಿಲ್ಲ ಯಾಕೆ? ಎಸ್‌ಐಟಿ ಪ್ರಗತಿಯ ವರದಿ ಈವರೆಗೆ ಸಾರ್ವಜನಿಕರಿಗೆ ಯಾಕೆ ಬಿಡುಗಡೆ ಮಾಡಿಲ್ಲ?

ಈಗ 74 ಅಸಹಜ ಸಾವುಗಳ ವಿಚಾರದಲ್ಲಿ ಸೌಜನ್ಯ ತಾಯಿ ಕುಸುಮಾವತಿಯವರು ಸಾರ್ವಜನಿಕ ಮೊಕದ್ದಮೆ ಸಲ್ಲಿಸಿದ್ದಾರೆ, ಈ ಅಸಹಜ ಸಾವುಗಳಲ್ಲಿ ಮರಣೋತ್ತರ ಪರೀಕ್ಷೆ ಮಾಡಿಲ್ಲ, ಇನ್‌ಕ್ವೆಸ್ಟ್ ಮಾಡಿಲ್ಲ, ಕೆಲವುದರಲ್ಲಿ ಎಫ್‌ಐಆರ್ ಕೂಡಾ ಆಗಿಲ್ಲ, ತನಿಖೆ ಮುಂದುವರೆದಿಲ್ಲ- ಯಾಕೆ?? ಈಗ ಹೈಕೋರ್ಟ್ ಈ ಪ್ರಕರಣಗಳಲ್ಲಿ ಏನು ನಡೆದಿದೆ ಎಂದು ಮಾಹಿತಿ ನೀಡುವಂತೆ ಕೇಳಿದೆ. ಈ ಹೋರಾಟ ಮುಂದುವರೆಯುತ್ತದೆ, ಆದರೆ ಸೌಜನ್ಯ ಪ್ರಕರಣದಲ್ಲಿ ಮರುತನಿಖೆ ಮಾಡಲು ಸರ್ಕಾರಗಳಿಗೇ ಅಧಿಕಾರ ಇದೆಯಲ್ಲ, ಯಾಕೆ ಮಾಡುತ್ತಿಲ್ಲ? ಸಿದ್ದರಾಮಯ್ಯ ಅವರು, ಪರಮೇಶ್ವರ್ ಅವರು ಯಾಕೆ ಮರುತನಿಖೆಯ ಆದೇಶ ನೀಡಬಾರದು? ಅದಕ್ಕೇಕೆ ಕುಸುಮಾವತಿಯವರು ಸುಪ್ರೀಂ ಕೋರ್ಟ್ ಗೆ ಹೋಗಬೇಕು?

ಯಡಿಯೂರಪ್ಪ ಸರ್ಕಾರ ಇದ್ದಾಗ ಯಾಕೆ ಮರುತನಿಖೆ ಮಾಡಿಸಲಿಲ್ಲ? ಬೇರೆ ಸರ್ಕಾರಗಳು ಯಾಕೆ ಮಾಡಲಿಲ್ಲ? ಇದು ವ್ಯವಸ್ಥೆಯ ವೈಫಲ್ಯ ಅಂತ ನಾವು ಹೇಳುತ್ತಿದ್ದೇವೆ, ಇದನ್ನು ಪ್ರಶಿಸುತ್ತಿದ್ದೇವೆ.”

Leave a Comment

Translate »