Gowtham gambhir worst coach kannada 

Gowtham gambhir worst coach kannada

ಭಾರತೀಯ ಕ್ರಿಕೆಟ್‌ನ ಇತ್ತೀಚಿನ ಹಿನ್ನಡೆಗಳು
ನ್ಯೂಜಿಲೆಂಡ್ ವಿರುದ್ಧ: ಮೊದಲ ಬಾರಿಗೆ ಭಾರತ ತನ್ನ ತಾಯ್ನಾಡಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಏಕದಿನ (ODI) ಸರಣಿಯನ್ನು ಸೋತಿದೆ.
ಶ್ರೀಲಂಕಾ ವಿರುದ್ಧ: 27 ವರ್ಷಗಳ ನಂತರ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಸೋಲು ಅನುಭವಿಸಿದೆ.
ಟೆಸ್ಟ್ ಸರಣಿ ಇತಿಹಾಸ: ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ ತನ್ನ ನೆಲದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಸೋತಿದೆ.
ಸತತ ಸೋಲುಗಳು: 12 ವರ್ಷಗಳ ನಂತರ ತಾಯ್ನಾಡಿನಲ್ಲಿ ಸತತ ಎರಡು ಟೆಸ್ಟ್ ಪಂದ್ಯಗಳನ್ನು ಸೋತಿದೆ.
ಸತತ 3 ಸೋಲುಗಳು: 47 ವರ್ಷಗಳ ನಂತರ ಭಾರತದಲ್ಲಿ ಸತತ 3 ಟೆಸ್ಟ್ ಪಂದ್ಯಗಳಲ್ಲಿ ಸೋಲನುಭವಿಸಿದೆ.
ಗುರಿ ಬೆನ್ನಟ್ಟುವಲ್ಲಿ ವಿಫಲ: ಮೊದಲ ಬಾರಿಗೆ ಭಾರತ ತನ್ನ ನೆಲದಲ್ಲಿ 200ಕ್ಕಿಂತ ಕಡಿಮೆ ಮೊತ್ತದ ಗುರಿಯನ್ನು ಬೆನ್ನಟ್ಟಲು ವಿಫಲವಾಗಿದೆ.
ವೈಟ್‌ವಾಶ್ ಮುಖಭಂಗ: ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತ ತಂಡ ತನ್ನ ತಾಯ್ನಾಡಿನಲ್ಲಿ 3-0 ಅಂತರದಿಂದ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ (ವೈಟ್‌ವಾಶ್) ಆಗಿದೆ.
ಮೆಲ್ಬೋರ್ನ್ ಸೋಲು: 13 ವರ್ಷಗಳ ನಂತರ ಮೆಲ್ಬೋರ್ನ್‌ನಲ್ಲಿ ಟೆಸ್ಟ್ ಪಂದ್ಯವನ್ನು ಸೋತಿದೆ.
ಸತತ ಸರಣಿ ಸೋಲುಗಳು: 10 ವರ್ಷಗಳ ನಂತರ ಸತತ ಎರಡು ಟೆಸ್ಟ್ ಸರಣಿಗಳಲ್ಲಿ ಸೋಲು ಕಂಡಿದೆ.
ಇಂದೋರ್ ಮೈದಾನ: ಇಂದೋರ್‌ನಲ್ಲಿ ಭಾರತ ಮೊದಲ ಬಾರಿಗೆ ಏಕದಿನ ಪಂದ್ಯವನ್ನು ಸೋತಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿ: 10 ವರ್ಷಗಳ ನಂತರ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಕಳೆದುಕೊಂಡಿದೆ.
ಭಾರತೀಯ ಕ್ರಿಕೆಟ್‌ನ ಇತ್ತೀಚಿನ ಕಹಿ ದಾಖಲೆಗಳು
ಆಸ್ಟ್ರೇಲಿಯಾ ವಿರುದ್ಧ ಸೋಲು: 12 ವರ್ಷಗಳ ನಂತರ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ 3 ಪಂದ್ಯಗಳನ್ನು ಸೋತಿದೆ.
WTC ಫೈನಲ್: ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ.
ಅಡಿಲೇಡ್ ಓಡಿಐ: 17 ವರ್ಷಗಳ ನಂತರ, ಅಡಿಲೇಡ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ (ODI) ಭಾರತ ಸೋಲನುಭವಿಸಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಸೋಲು: 15 ವರ್ಷಗಳ ನಂತರ, ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ (Home Test) ಟೆಸ್ಟ್ ಪಂದ್ಯವನ್ನು ಸೋತಿದೆ.
ರನ್ ರಕ್ಷಿಸುವಲ್ಲಿ ವಿಫಲ: 92 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ಎರಡನೇ ಬಾರಿಗೆ, 350ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ರಕ್ಷಿಸಿಕೊಳ್ಳಲು ಭಾರತಕ್ಕೆ ಸಾಧ್ಯವಾಗಲಿಲ್ಲ.
600+ ರನ್ ಬಿಟ್ಟುಕೊಟ್ಟಿದ್ದು: 11 ವರ್ಷಗಳ ನಂತರ ಎದುರಾಳಿ ತಂಡಕ್ಕೆ 600ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿದೆ (ಮ್ಯಾಂಚೆಸ್ಟರ್‌ನಲ್ಲಿ ಎದುರಾಳಿಗಳು 350+ ರನ್ ಬೆನ್ನಟ್ಟಿದರು).
ಈಡನ್ ಗಾರ್ಡನ್ಸ್ ದಾಖಲೆ: ಸತತ 9 ಗೆಲುವುಗಳ ನಂತರ, 8 ವರ್ಷಗಳ ಬಳಿಕ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಭಾರತ ಅಂತರಾಷ್ಟ್ರೀಯ ಪಂದ್ಯವೊಂದನ್ನು ಸೋತಿದೆ.
ಕನಿಷ್ಠ ಗುರಿ ಬೆನ್ನಟ್ಟುವಲ್ಲಿ ವಿಫಲ: 124 ರನ್‌ಗಳ ಸಣ್ಣ ಗುರಿಯನ್ನು ಬೆನ್ನಟ್ಟಲು ಸಾಧ್ಯವಾಗದೆ ಭಾರತ ಸೋತಿದೆ—ಇದು ತವರಿನಲ್ಲಿ ಬೆನ್ನಟ್ಟಲು ವಿಫಲವಾದ ಅತ್ಯಂತ ಕಡಿಮೆ ಮೊತ್ತವಾಗಿದೆ.
ಸರಣಿ ಸೋಲು: 25 ವರ್ಷಗಳ ನಂತರ, ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಟೆಸ್ಟ್ ಸರಣಿಯನ್ನು ಕಳೆದುಕೊಂಡಿದೆ.
ಅತಿದೊಡ್ಡ ಸೋಲು: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತನ್ನ ಅತಿದೊಡ್ಡ ಸೋಲನ್ನು ದಾಖಲಿಸಿದೆ (408 ರನ್‌ಗಳ ಸೋಲು).
ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಒಳ ಜಗಳ ಐಪಿಎಲ್ ಸಮಯದಲ್ಲಿ ಹೊರಬಂದಿದ್ದು ಜನ ನೋಡಿದ್ದಾರೆ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ಸೋತ ನಂತರ ಕ್ರಿಕೆಟ್ ಅಭಿಮಾನಿಗಳು ಶೇಮ್ ಆನ್ ಗಂಭೀರ್ ಅಂತ ಮೈದಾನದಲ್ಲಿ ಕೂಗಿದ್ದು ವಿರಾಟ್ ಕೊಹ್ಲಿ ಕೈ ಸನ್ನೆ ಮಾಡಿ ಸುಮ್ಮನೆ ಇರಿ ಅಂತ ಹೇಳಿದ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದನ್ನು ಗಮನಿಸಿದ್ದೇವೆ ಭಾರತ ತಂಡದ ವಿವಾದಾತ್ಮಕ ಕೋಚ್ ಗ್ರೆಗ್ ಚಾಪೆಲ್ ಅವರ ಸಾಲಿಗೆ ಗೌತಮ್ ಗಂಭೀರ್ ಸೇರುತ್ತಾರೆ ಅಂತ ಕೆಲವು ಕ್ರಿಕೆಟ್ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ ಏಕೆಂದ್ರೆ ಟೆಸ್ಟ್ ಮತ್ತು ಏಕದಿನ ಸರಣಿಯಲ್ಲಿ ಭಾರತ ತವರಿನಲ್ಲಿ ಮುಗ್ಗರಿಸುತ್ತಿದೆ ಕೇವಲ t 20 ಆಲ್ಲಿ ಮಾತ್ರ ಉತ್ತಮ ಪ್ರದರ್ಶನ ತೋರುತ್ತಿದೆ ಗೌತಮ್ ಗಂಭೀರ್ ಬಿಜೆಪಿ ಕೋಟದ ಕೋಚ್ ಎಂದು ಟ್ರೋಲ್ ಮಾಡುತ್ತಿದ್ದರೆ
ರಾಹುಲ್ ದ್ರಾವಿಡ್ ಅವರು ಭಾರತ ತಂಡದ ಕೋಚ್ ಆಗಿದ್ದಾಗ ಚೇತೇಶ್ವರ ಪೂಜಾರ ಅಜಿಂಕ್ಯ ರಹಾನೆ ಇಶಾಂತ್ ಶರ್ಮಾ ಅಂತ ಉತ್ತಮ ಟೆಸ್ಟ್ ಆಟಗಾರರು ಇದ್ದರು ಆದರೆ ಗೌತಮ್ ಗಂಭೀರ್ ಭಾರತ ತಂಡಕ್ಕೆ ಆಡಬಹುದಾದ ಉತ್ತಮ ಟೆಸ್ಟ್ ಆಟಗಾರರನ್ನು ರಣಜಿ ಟ್ರೋಫಿ ದೇಸಿ ಟೂರ್ನಿ ಅಲ್ಲಿ ಗುರುತಿಸಿ ಅವಕಾಶ ನೀಡಲು ವಿಫಲರಾಗಿದ್ದಾರೆ ಐಪಿಎಲ್ ಮಾನದಂಡ ಇಟ್ಟು ಕೊಂಡು ಆಟಗಾರನ್ನು ಆಯ್ಕೆ ಮಾಡಿರುವುದು ಹಿನ್ನಡೆ ತಂದಿದೆ ಹಿರಿಯ ಆಟಗಾರರದ ವೃದ್ಧಿಮಾನ್ ಶಾ, ಇಶಾಂತ್ ಶರ್ಮಾ, ಅಜಿಂಕ್ಯಾ ರಹಾನೆ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್ ,ರೋಹಿತ್ ಶರ್ಮಾ ಅಂತ ಆಟಗಾರರು ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ ಆದರೆ ಅವರ ಸ್ಥಾನ ತುಂಬಾ ಬಲ್ಲ ಆಟಗಾರರು ಇಲ್ಲದೆ ಇರುವುದು ತುಂಬಾ ನಷ್ಟ ಆಗಿದೆ ತವರಿನಲ್ಲಿ ಟೆಸ್ಟ್ ನಲ್ಲಿ ನೀರಸ ಪ್ರದರ್ಶನ ತೋರಿ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಗೆ ಆಯ್ಕೆ ಆಗದೇ ಇರುವುದು ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಏಕದಿನ ಸರಣಿಯಲ್ಲಿ ಸೋತಿರುವುದು ನೋಡುತ್ತಿದ್ದರೆ ಭಾರತ ತಂಡ ಈ ಸೋಲಿಗೆ ಗೌತಮ್ ಗಂಭೀರ್ ಅವರೇ ನೇರ ಹೊಣೆಗಾರರಗುತ್ತಾರೆ

Leave a Comment

Translate »