ಸುನಿತಾ ವಿಲಿಯಮ್ಸ್ ಬಾಹ್ಯಾಕಾಶ ಲೋಕದಲ್ಲಿ ಅದ್ಭುತ ಸಾಧನೆ ಮಾಡಿದ ಭಾರತ ಮೂಲದ ಅಮೆರಿಕನ್. ಅವರ ತಂದೆ ಭಾರತದವರು. ಪ್ರಧಾನಿ ಮೋದಿ ಅವರ ತವರು ಗುಜರಾತ್ ನವರು. ನಾಸಾದ ಅತ್ಯಂತ ಗಗನ ಯಾತ್ರಿಗಳಲ್ಲಿ ಒಬ್ಬರಾದ ಸುನಿತಾ ವಿಲಿಯಮ್ಸ್ ತಮ್ಮ 27 ವರ್ಷಗಳ ಸುದೀರ್ಘ ವೃತ್ತಿ ಜೀವನಕ್ಕೆ ವಿದಾಯವನ್ನು ಇತ್ತೀಚೆಗೆ ಹೇಳಿದ್ದಾರೆ. ಸ್ವಲ್ಪ ದಿನಗಳ ನಂತರ ಅವರು ಕೈಗೊಂಡಿರುವ ಭಾರತ ಪ್ರವಾಸ ದೇಶದ ಸಂಚಲನ ಮೂಡಿಸಿದೆ.
ಕೇರಳ ಸಾಹಿತ್ಯ ಹಬ್ಬ ಮತ್ತು ದೆಹಲಿಯ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ಅವರು ಭಾರತೀಯ ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಚಿಲುಮೆ ಆಗಿದ್ದಾರೆ. ಅವರು ಹೋದಲ್ಲೆಲ್ಲಾ ಜನ ವಿದ್ಯಾರ್ಥಿಗಳು ಭೇಟಿ ಆಗೋಕೆ ಅವರೊಂದಿಗೆ ಮಾತನಾಡೋಕೆ ಫೋಟೋ ತೆಗೆಸಿಕೊಳ್ಳೋಕೆ ಮುಗಿಬೀಳುತ್ತಿದ್ದಾರೆ.ಇಷ್ಟು ದೊಡ್ಡ ಸಾಧನೆ ಮಾಡಿ ಬಂದಾಗ ಆಕೆಗೆ ಭಾರತ ಸರ್ಕಾರದಿಂದ ಮತ್ತು ಗುಜರಾತ್ ಸರ್ಕಾರದಿಂದ ಯಾವುದೇ ಅಭಿನಂದನೆ, ಸನ್ಮಾನ, ಸ್ವಾಗತ ಯಾವುದು ಇಲ್ಲ ಯಾಕೆ ಎಂಬ ಪ್ರಶ್ನೆ ಎದ್ದಿದೆ. ಅದಕ್ಕೆ ಉತ್ತರವಾಗಿ ಸುನಿತಾ ಅವರ ಕುಟುಂಬದ ಹಿನ್ನೆಲೆ ಗುಜರಾತ್ ರಾಜಕೀಯದ ಕರಾಳ ಅಧ್ಯಾಯ ಒಂದು ಮತ್ತೆ ಮುನ್ನೆಲೆಗೆ ಬಂದಿದೆ. ಭಾರತೀಯ ಮೂಲದ ಅಂತರಾಷ್ಟ್ರೀಯ ಸಾಧಕರನ್ನು ಅಭಿನಂದಿಸುವಲ್ಲಿ ಸದಾ ಮುಂದಿರುವ ಕೇಂದ್ರ ಸರ್ಕಾರ ಮತ್ತು ಗುಜರಾತ್ ಸರ್ಕಾರ ಈ ಬಾರಿ ಸುನಿತಾ ಅವರ ವಿಷಯದಲ್ಲಿ ತಳೆದಿರುವ ಮೌನ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಈ ಮೌನದ ಹಿಂದೆ ಇರೋದು 23 ವರ್ಷಗಳ ಹಿಂದೆ ನಡೆದ ಗುಜರಾತ್‌ನ ಮಾಜಿ ಗೃಹ ಸಚಿವ ಹರೇನ್ ಪಾಂಡ್ಯ ಅವರ ನಿಗೂಢ ಹತ್ಯೆ ಮತ್ತು ಅವರೊಂದಿಗೆ ಸುನಿತಾ ಅವರಿಗೆ ಇರೋ ಹತ್ತಿರದ ಕೌಟುಂಬಿಕ ಸಂಬಂಧ. ಸುನಿತಾ ವಿಲಿಯಮ್ಸ್ ಅವರ ತಂದೆ ದೀಪಕ್ ಪಾಂಡ್ಯ ಮತ್ತು ವಿಠಲ್ ಭಾಯಿ ಪಾಂಡ್ಯ ಅವರು ಸ್ವಂತ ಅಣ್ಣ ತಮ್ಮಂದಿರು.ಸುನಿತಾ ಅವರ ಚಿಕ್ಕಪ್ಪನ ಮಗನೇ ಹರೇನ್ ಪಾಂಡ್ಯ. ಸುನಿತಾ ಅವರು ಹರೇನ್ ಪಾಂಡ್ಯ ಅವರೊಂದಿಗೆ ಆಪ್ತ ಒಡನಾಟ ಇದ್ದವರು. 1998ರಲ್ಲಿ ಹರೇನ್ ಪಾಂಡ್ಯ ಗುಜರಾತ್ ವಿಧಾನ ಸಭಾ ಚುನಾವಣೆಗೆ ಎಲಿಸ್‌ಬ್ರಿಡ್ಜ್ ಕ್ಷೇತ್ರದಿಂದ ಸ್ಪರ್ಧೆ ಮಾಡಿದಾಗ ಸುನಿತಾ ವಿಲಿಯಮ್ಸ್ ಅಮೆರಿಕಾದಿಂದ ಗುಜರಾತ್‌ಗೆ ಆಗಮಿಸಿ ಹರೇನ್ ಪಾಂಡ್ಯ ಅವರ ಪರವಾಗಿ ಪ್ರಚಾರ ನಡೆಸಿದರು. ಹರೇನ್ ಪಾಂಡ್ಯ ಅವರ ವಿಜಯೋತ್ಸವದ ಸಂದರ್ಭದಲ್ಲಿ ಭಾಗವಹಿಸಿದ ಫೋಟೋಗಳು ಇವತ್ತಿಗೂ ಆ ನೆನಪಿನ ಬಂಡಾರಕ್ಕೆ ಸಾಕ್ಷಿಯಾಗಿದೆ. ಹರೇನ್ ಪಾಂಡ್ಯ ಗುಜರಾತ್‌ನ ಅತ್ಯಂತ ಪ್ರಭಾವಿ ಮತ್ತು ಜನಪ್ರಿಯ ನಾಯಕರಾಗಿದ್ದರು.
ಆ ಆದರೆ 2001ರಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿದವು. ಹರೇನ್ ಪಾಂಡ್ಯ ಅವರು ಕ್ಷೇತ್ರವನ್ನು ನರೇಂದ್ರ ಮೋದಿ ಅವರಿಗೆ ಬಿಟ್ಟು ಕೊಡಲು ನಿರಾಕರಿಸಿದರು. ಮುಂದೆ ಗುಜರಾತ್ ಹತ್ಯಾಕಾಂಡ ಸಂದರ್ಭದಲ್ಲಿ ನರೇಂದ್ರ ಮೋದಿ ವಿರುದ್ಧವಾಗಿ ಮಾತನಾಡಿದರು. ನ್ಯಾಯಾಧೀಶರ ಮುಂದೆ ಅವರು ನರೇಂದ್ರ ಮೋದಿ ಮತ್ತು ಸರಕಾರದ ಮೇಲೆ ಗಂಭೀರ ಆರೋಪ ಮಾಡಿದರು.2002 ಫೆಬ್ರವರಿ 27 ರಂದು ನಡೆದ ಸಾಬರಮತಿ ರೈಲನ್ನು ಸುಟ್ಟವರು ಮತ್ತು ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಗೋದ್ರಾ ದುರಂತಕ್ಕೆ ಹಿಂದೂಗಳ ಪ್ರತಿರೋಧ ಇರಲಿದೆ, ಅದನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಮುಖ್ಯಮಂತ್ರಿ ಮೋದಿ ಸೂಚನೆ ನೀಡಿದ್ದರು ಅಂತ ಹರೇನ್ ಪಾಂಡ್ಯ ಅವರು ಆರೋಪಿಸಿದ್ದರು. ಇದರ ಪರಿಣಾಮವಾಗಿ ಅವರಿಗೆ ಮುಂದಿನ ಚುನಾವಣೆಗಳಲ್ಲಿ ಟಿಕೆಟ್ ನಿರಾಕರಿಸಲಾಯಿತು. 2003 ಮಾರ್ಚ್ 26 ರಂದು ಬೆಳಗಿನ ಜಾವ ವಾಕಿಂಗ್ ಹೋಗಿದ್ದಾಗ ಹರೇನ್ ಪಾಂಡ್ಯ ಅವರ ಹತ್ಯೆಯಾಯಿತು. ಇದು ಈ ಹತ್ಯೆ ಭಾರತೀಯ ಅತ್ಯಂತ ವಿವಾದಾತ್ಮಕ ಪ್ರಕರಣಗಳಲ್ಲಿ ಒಂದಾಗಿದೆ.
ಹರೇನ್ ಅವರ ತಂದೆ ವಿಠಲ್ ಭಾಯಿ ಪಾಂಡ್ಯ ಅವರು ತಮ್ಮ ಮಗನ ಹತ್ಯೆಯನ್ನು “ರಾಜಕೀಯ ಹತ್ಯೆ” ಎಂದು ನೇರವಾಗಿ ಆರೋಪ ಮಾಡಿದ್ದರು.ಅವರು ಅಂದಿನ ಗುಜರಾತ್ ಸರ್ಕಾರದ ಮೇಲೆ ನೇರವಾದ ಆರೋಪಗಳನ್ನು ಮಾಡಿದ್ದರು.2004ರಲ್ಲಿ ಹರೇನ್ ಪಾಂಡ್ಯ ಅವರ ತಂದೆ ವಿಠಲ್ ಭಾಯಿ ಪಾಂಡ್ಯ ಅವರು ಗಾಂಧಿನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಲ್.ಕೆ. ಅಡ್ವಾಣಿ ಅವರ ವಿರುದ್ಧವೇ ಸ್ಪರ್ಧೆ ಮಾಡಿದ್ದರು.ಈ ಹತ್ಯೆಯ ತನಿಖೆಯಲ್ಲಿ 12 ಮಂದಿ ಆರೋಪಿಗಳಿಗೆ ಶಿಕ್ಷೆಯಾಗಿದ್ದರೂ, ಹತ್ಯೆಯ ಹಿಂದಿನ ಮಾಸ್ಟರ್ ಮೈಂಡ್ ಯಾರೂ ಎಂಬ ಬಗ್ಗೆ ಇವತ್ತಿಗೂ ಸಂಶಯ ಉಳಿದಿದೆ.ಸಿಬಿಐ ಮತ್ತು ಗುಜರಾತ್ ಪೊಲೀಸರು ಹರೇನ್ ಪಾಂಡ್ಯ ಕೊಲೆ ತನಿಖೆಯನ್ನು ಹಳ್ಳ ಹಿಡಿಸಿದ್ದಾರೆ ಎಂದು ವಿಠಲ್ ಭಾಯಿ ಪಾಂಡ್ಯ ಆರೋಪಿಸಿದ್ದರು.ಸುನಿತಾ ವಿಲಿಯಮ್ಸ್ ಅವರ ಇತ್ತೀಚಿನ ಬಾಹ್ಯಾಕಾಶ ಯಶಸ್ಸಿನ ವೇಳೆ ಕೇಂದ್ರ ಸರ್ಕಾರ ಮತ್ತು ಗುಜರಾತ್ ಸರ್ಕಾರ ತೋರಿದ ತಟಸ್ಥ ಮನೋಭಾವಕ್ಕೆ ಈ ಹಳೆಯ ರಾಜಕೀಯ ಕಾರಣ ಇರಬಹುದು ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ.ಸುನಿತಾ ವಿಲಿಯಮ್ಸ್ ಅವರು 2007ರಲ್ಲಿ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ಹೋಗಿ ಬಂದಾಗಲೂ ಇದೇ ರೀತಿ ಗುಜರಾತ್ ಸರ್ಕಾರ ಅಂತರ ಕಾಯ್ದುಕೊಂಡಿತ್ತು ಎಂದು ಅಂದಿನ ಮಾಧ್ಯಮಗಳು ವರದಿ ಮಾಡಿದ್ದವು.
ಇಂದು ಅವರು ನಿವೃತ್ತರಾಗಿ ಭಾರತಕ್ಕೆ ಬಂದಿದ್ದರೂ ಅವರು ಹರೇನ್ ಪಾಂಡ್ಯ ಅವರ ಸಮಾಧಿಗೆ ಭೇಟಿ ನೀಡಿರುವುದರಿಂದ ಆಡಳಿತಾರೂಢ ಪಕ್ಷಕ್ಕೆ ಮುಜುಗರ ಉಂಟಾಗಬಹುದು ಎಂಬ ಕಾರಣದಿಂದ ಅಂತರ ಕಾಯ್ದುಕೊಂಡಿದ್ದಾರೆ ಅಂತ ಹೇಳಲಾಗಿದೆ. ಸುನಿತಾ ವಿಲಿಯಮ್ಸ್ ಅವರು ಭಾರತದ ಮೇಲಿನ ಪ್ರೀತಿಯನ್ನು ಹಂಚಿಕೊಂಡಿದ್ದಾರೆ. ಬಾಹ್ಯಾಕಾಶದಿಂದ ಹಿಮಾಲಯದ ಸೌಂದರ್ಯ, ಗಂಗೆಯ ಹರಿವು ಭಾರತದ ಕರಾವಳಿಗಳ ಬಗ್ಗೆ ಅವರು ಹೇಳಿಕೊಂಡಿದ್ದಾರೆ. “ಬಾಹ್ಯಾಕಾಶದಲ್ಲಿ ನಾನು ಇರುತ್ತಿದ್ದೆ, ನಾನು ನನ್ನ ಪ್ರೀತಿಯ ನಾಯಿಯ ಬಹಳ ಮಿಸ್ ಮಾಡಿಕೊಂಡಿದ್ದೇನೆ”. “ಬಾಹ್ಯಾಕಾಶದಲ್ಲಿ ಕಣ್ಣೀರು ಕೆಳಗೆ ಸುರಿಯುವುದಿಲ್ಲ, ಬದಲಾಗಿ ಅದು ಕಣ್ಣಿನಲ್ಲೇ ಒಂದು ಗುಳ್ಳೆಯಾಗಿ ನಿಲ್ಲುತ್ತದೆ”. ಬಾಹ್ಯಾಕಾಶದಿಂದ ಭೂಮಿಯನ್ನು ನೋಡಿದರೆ ಒಂದು ಅದ್ಭುತ ವಿಹಂಗಮ ನೋಟ ಸಿಗುತ್ತದೆ. ಭಾರತ ಮಿನುಗುವ ನಕ್ಷತ್ರದಂತೆ ಕಾಣುತ್ತದೆ. ಹಿಮಾಲಯ ಮತ್ತು ನದಿಗಳು ಸಮುದ್ರ ಸೇರುವುದು ಅದ್ಭುತವಾಗಿ ಕಾಣುತ್ತದೆ ಎಂದು ಸುನಿತಾ ವಿಲಿಯಮ್ಸ್ ಅವರ ಸಾಧನೆ ಎಂದಿಗೂ ಎಲ್ಲರೂ ನೆನಪಿಡುವಂತೆ ದಾಖಲಾಗಿದೆ. ಭಾರತದ ಮೂಲದ ಅಮೇರಿಕನ್ ಆಗಿದ್ದರೂ ಕೂಡ ಒಂದು ಹೆಣ್ಣಾಗಿ ದೊಡ್ಡ ಸಾಧನೆ ಮಾಡಿದ್ದಾರೆ
1998ರಲ್ಲಿ ಸುನಿತಾ ವಿಲಿಯಮ್ಸ್ ಅವರನ್ನು NASA ಅಂತರಿಕ್ಷ ಯಾತ್ರಿಯಾಗಿ ಆಯ್ಕೆ ಮಾಡಲಾಯಿತು.
2006ರಲ್ಲಿ ಮೊದಲ ಬಾರಿಗೆ ಸ್ಪೇಸ್ ಶಟಲ್ ಡಿಸ್ಕವರಿ ಮೂಲಕ ಬಾಹ್ಯಾಕಾಶಕ್ಕೆ ಹೋದರು.ಅಲ್ಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ನಲ್ಲಿ ಕೆಲಸ ಮಾಡಿದರು
ಒಟ್ಟು 600+ ದಿನಗಳು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ.9 ಸ್ಪೇಸ್ ವಾಕ್‌ಗಳು ಮಾಡಿದ್ದಾರೆ.ISS ನಲ್ಲಿ ಟ್ರೆಡ್‌ಮಿಲ್ ಮೇಲೆ ಮ್ಯಾರಥಾನ್ ಓಡಿದ ಮೊದಲ ಮಹಿಳೆ.
ಸುನೀತಾ ವಿಲಿಯಮ್ಸ್ ಅವರ ಗಂಡ ಮೈಕೆಲ್ ಜೆ. ವಿಲಿಯಮ್ಸ್. ಅವರು ಅಮೆರಿಕಾದ ಫೆಡರಲ್ ಮಾರ್ಷಲ್ (ಕಾನೂನು ಜಾರಿ ಅಧಿಕಾರಿ) ಆಗಿ ಟೆಕ್ಸಾಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಸುನೀತಾ ಮತ್ತು ಮೈಕೆಲ್ ಅವರು 20 ವರ್ಷಕ್ಕಿಂತ ಹೆಚ್ಚು ಕಾಲದಿಂದ ವಿವಾಹಿತರಾಗಿದ್ದಾರೆ. ಅವರು ಮೊದಲ ಬಾರಿ ಭೇಟಿಯಾದದ್ದು ಮೆರಿಲ್ಯಾಂಡ್ ರಾಜ್ಯದ ಅನಾಪೊಲಿಸ್‌ನಲ್ಲಿರುವ ಯುಎಸ್ ನೇವಲ್ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಸಮಯದಲ್ಲಿ. ಇಬ್ಬರಿಗೂ ಹೆಲಿಕಾಪ್ಟರ್ ಹಾರಿಸುವ ಅನುಭವ ಇದ್ದುದರಿಂದ ಅವರ ನಡುವೆ ಒಳ್ಳೆಯ ಸಂಪರ್ಕ ಬೆಳೆದಿತು. ನಂತರ ಸುನೀತಾ ವಿಲಿಯಮ್ಸ್ ಅವರು ನಾಸಾ ಅಂತರಿಕ್ಷಯಾನಿಯಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು.
ಕಲ್ಪನಾ ಚಾವ್ಲಾ ನಂತರ ಗಗನ ಯಾತ್ರೆ ಮಾಡಿದ ಭಾರತೀಯ ಹೆಮ್ಮೆಯ ಹೆಣ್ಣು ಮಗಳು ಸುನೀತಾ ವಿಲಿಯಮ್ಸ್ ಸೆಪ್ಟೆಂಬರ್ 19 ರಂದು ಅಮೆರಿಕದಲ್ಲಿ ಜನಿಸಿದರು ಅವರ ತಂದೆ ದೀಪಕ್ ಪಾಂಡ್ಯ ಭಾರತೀಯರು ತಾಯಿ ಬೋನಿ ಪಾಂಡ್ಯ ಸ್ಲೊವೆನಿಯಾ ಮೂಲದವರು ಸುನೀತಾ ವಿಲಿಯಮ್ಸ್ ಅವರು ಬಾಲ್ಯದಲ್ಲಿ ವಿಜ್ನಾನ ವಿಷಯದಲ್ಲಿ ಆಸಕ್ತಿ ಹೊಂದಿದ್ದರು 1983 ರಲ್ಲಿ ಹೈಸ್ಕೂಲ್ ಮುಗಿಸಿ 1987 ರಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಬ್ಯಾಚುಲರ್ ಪದವಿ ಪಡೆದರು ನಂತರ ಇಂಜಿನಿಯರಿಂಗ್ ಮ್ಯಾನೇಜ್ಮೆಂಟ್ ನಲ್ಲಿ ಮಾಸ್ಟರ್ ಪದವಿ ಪಡೆದಿದ್ದಾರೆ ಮತ್ತು ಅಮೆರಿಕದ ನೌಕಾ ಪಡೆ ಸೇರಿ ಪೈಲೆಟ್ ಆಗಿ ಸೇವೆ ಸಲ್ಲಿಸಿದ್ದಾರೆ
